Revenue Minister R. Ashok Speaks About His 'Grama Vaastavya' Program | Public TV

2022-10-16 7

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ರಾಯಚೂರಿನ ಅರಕೇರಾದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ ಮಾಡಿದ್ದಾರೆ. ನಿನ್ನೆ ರಾತ್ರಿ ಅರಕೇರಾದ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ ಮಲಗಿದ್ದ ಸಚಿವರು.ಬೆಳಿಗ್ಗೆ ವಸತಿನಿಲಯದ ಆವರಣದಲ್ಲಿ ಸಸಿ ನೆಟ್ಟು ,ನೀರುಣಿಸಿದರು. ಗ್ರಾಮದಲ್ಲಿ ಕಾಲ್ನಡಿಗೆಯಲ್ಲೇ ಅಧಿಕಾರಿಗಳೊಂದಿಗೆ ತೆರಳಿ ಬೀದಿ ಬದಿಯ ಟೀ ಅಂಗಡಿಯಲ್ಲಿ ಚಹ ಸೇವಿಸಿದರು.ದಾರಿಯುದ್ದಕ್ಕೂ ರಸ್ತೆ ಬದಿ ಅಂಗಡಿ ವ್ಯಾಪಾರಿಗಳನ್ನ ಮಾತನಾಡಿಸಿ ಸಮಸ್ಯೆ ಆಲಿಸಿದರು. ಚಹಾ ಸೇವನೆ ವೇಳೆ ಗ್ರಾಮದ ಜನರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಈ ಕುರಿತು ನಮ್ಮ ರಾಯಚೂರು ಪ್ರತಿನಿಧಿ ವಿಜಯ್ ಜಾಗಟಗಲ್ ಸಚಿವ ಆರ್.ಅಶೋಕ್ ಜೊತೆ ಮಾಡಿದ ಚಿಟ್ ಚಾಟ್ ಇಲ್ಲಿದೆ..

#publictv #rashok